ನಮ್ಮ ಸರ್ಕಾರಿ ಶಾಲೆ - ನಮ್ಮ ಹೆಮ್ಮೆ: ಕಾಶೇನಟ್ಟಿ ಶಾಲೆಯಲ್ಲಿ 2026-27ನೇ ಸಾಲಿನ ದಾಖಲಾತಿ ಆರಂಭ!

ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಲೇನಟ್ಟಿ (ತಾ: ಅಳ್ನಾವರ, ಜಿ: ಧಾರವಾಡ) ಇಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ 1 ರಿಂದ 8ನೇ ತರಗತಿಯ ಪ್ರವೇಶಾತಿಗಳು ಅಧಿಕೃತವಾಗಿ ಆರಂಭವಾಗಿವೆ ಎಂದು ತಿಳಿಸಲು ನಾವು ಹೆಮ್ಮೆಪಡುತ್ತೇವೆ.
ನಿಮ್ಮ ಮಗುವಿನ ಉಜ್ವಲ ಭವಿಷ್ಯಕ್ಕಾಗಿ ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ ಇಂದೇ ನಮ್ಮ ಶಾಲೆಯನ್ನು ಆಯ್ಕೆ ಮಾಡಿ. ನಮ್ಮ ಶಾಲೆಯಲ್ಲಿ ಲಭ್ಯವಿರುವ ವಿಶೇಷ ಸೌಲಭ್ಯಗಳು ಇಲ್ಲಿವೆ:
ನಮ್ಮ ಶಾಲೆಯ ಪ್ರಮುಖ ಸೌಲಭ್ಯಗಳು:
- ಉಚಿತ ಪಠ್ಯಪುಸ್ತಕ ಮತ್ತು ಅಭ್ಯಾಸ ಪುಸ್ತಕಗಳು: ಕಲಿಕೆಗೆ ಪೂರಕವಾದ ಪರಿಕರಗಳನ್ನು ಉಚಿತವಾಗಿ ನೀಡಲಾಗುವುದು.
- ಉಚಿತ ಸಮವಸ್ತ್ರ ಮತ್ತು ಪಾದರಕ್ಷೆ: ಎರಡು ಜೊತೆ ಉಚಿತ ಸಮವಸ್ತ್ರ ಹಾಗೂ ಒಂದು ಜೊತೆ ಶೂ ಮತ್ತು ಸಾಕ್ಸ್ ವಿತರಣೆ.
- ಪೌಷ್ಟಿಕ ಆಹಾರ ಯೋಜನೆ: ಕ್ಷೀರಭಾಗ್ಯ, ರಾಗಿ ಮಾಲ್ಟ್ ಮತ್ತು ಮಧ್ಯಾಹ್ನದ ಬಿಸಿ ಊಟದ ಸೌಲಭ್ಯ.
- ಹೆಚ್ಚುವರಿ ಪೌಷ್ಟಿಕಾಂಶ: ಮಗುವಿನ ಆರೋಗ್ಯಕ್ಕಾಗಿ ಮೊಟ್ಟೆ ಅಥವಾ ಬಾಳೆಹಣ್ಣು ವಿತರಣೆ.
- ವಿದ್ಯಾರ್ಥಿವೇತನ: ಅರ್ಹ ಎಲ್ಲಾ ಮಕ್ಕಳಿಗೂ ಸರ್ಕಾರದ ವಿದ್ಯಾರ್ಥಿವೇತನ ಲಭ್ಯ.
- ಶುದ್ಧ ಕುಡಿಯುವ ನೀರು: ಮಕ್ಕಳಿಗೆ ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ.
- ಪ್ರತಿಭಾ ಕಾರಂಜಿ ಮತ್ತು ಕ್ರೀಡೆ: ಶೈಕ್ಷಣಿಕ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ.
- ಅನುಭವಿ ಶಿಕ್ಷಕರು: ತರಬೇತಿ ಪಡೆದ ಪರಿಣಿತ ಶಿಕ್ಷಕರಿಂದ ಗುಣಮಟ್ಟದ ಬೋಧನೆ.
- NMMS ತರಗತಿಗಳು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ.
- ಆರೋಗ್ಯ ತಪಾಸಣೆ: ಕಾಲಕಾಲಕ್ಕೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು.
- ಯಾವುದೇ ಡೊನೇಷನ್ ಇರುವುದಿಲ್ಲ: ಉಚಿತ ಮತ್ತು ಕಡ್ಡಾಯ ಶಿಕ್ಷಣದ ಅಡಿಯಲ್ಲಿ ಪಾರದರ್ಶಕ ದಾಖಲಾತಿ.

ನಮ್ಮ ಶಾಲೆಯ ಹೆಮ್ಮೆಯ ಪ್ರತಿಭೆಗಳು
ಪೋಷಕರಿಗೊಂದು ಕಿವಿಮಾತು
ಯಾಕೆ ಸರ್ಕಾರಿ ಶಾಲೆ?
ಇಂದು ಸರ್ಕಾರಿ ಶಾಲೆಗಳು ಸಾಮಾಜಿಕ ಬದಲಾವಣೆಯ ಹರಿಕಾರರು. ಇಲ್ಲಿ ಸಿಗುವ ಸಮಾನತೆ, ಉಚಿತ ಸೌಲಭ್ಯಗಳು ಮತ್ತು ತರಬೇತಿ ಪಡೆದ ಶಿಕ್ಷಕರು ಮಗುವನ್ನು ಒಬ್ಬ ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪಿಸುತ್ತಾರೆ. ಲಕ್ಷಾಂತರ ರೂಪಾಯಿ ಹಣ ನೀಡುವ ಖಾಸಗಿ ಶಾಲೆಗಳಿಗಿಂತ, ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡುವ ನಮ್ಮ ಸರ್ಕಾರಿ ಶಾಲೆ ನಿಮ್ಮ ಮಗುವಿನ ಪ್ರತಿಭೆಗೆ ಸಾಣೆ ಹಿಡಿಯಲಿದೆ.
- ನುರಿತ ಮತ್ತು ಅರ್ಹ ಶಿಕ್ಷಕರು: ಸರ್ಕಾರಿ ಶಾಲೆಯ ಶಿಕ್ಷಕರು ಕಠಿಣ ಪರೀಕ್ಷೆ ಎದುರಿಸಿ ಬಂದ ಪದವೀಧರರು ಮತ್ತು ನಿರಂತರ ತರಬೇತಿ ಪಡೆದ ಅನುಭವಿಗಳಾಗಿರುತ್ತಾರೆ.
- ಕನ್ನಡದ ಸೊಗಡು - ಇಂಗ್ಲಿಷ್ ಕಲಿಕೆ: ಮಾತೃಭಾಷೆಯಲ್ಲಿ ಕಲಿಕೆಯ ಜೊತೆಗೆ ಇಂದಿನ ಅಗತ್ಯಕ್ಕೆ ತಕ್ಕಂತೆ ಇಂಗ್ಲಿಷ್ ಭಾಷೆಯನ್ನೂ ಇಲ್ಲಿ ಸಮರ್ಥವಾಗಿ ಕಲಿಸಲಾಗುತ್ತದೆ.
- ಒತ್ತಡವಿಲ್ಲದ ಕಲಿಕೆ: ಮಗುವಿನ ಆಸಕ್ತಿಗೆ ಅನುಗುಣವಾಗಿ ಚಟುವಟಿಕೆ ಆಧಾರಿತ ಶಿಕ್ಷಣ (Nali Kali) ನೀಡಲಾಗುತ್ತದೆ.
- ಸಾಮಾಜಿಕ ಸಮಾನತೆ: ಇಲ್ಲಿ ಎಲ್ಲಾ ವರ್ಗದ ಮಕ್ಕಳು ಒಂದೇ ವೇದಿಕೆಯಲ್ಲಿ ಬೆರೆಯುವುದರಿಂದ ಮಗುವಿನಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಸಹಬಾಳ್ವೆ ಬೆಳೆಯುತ್ತದೆ.

ಶಿಕ್ಷಕ-ಪೋಷಕರ ಸಭೆ
📝 ದಾಖಲಾತಿ ಪ್ರಕ್ರಿಯೆ ಮತ್ತು ಅಗತ್ಯ ದಾಖಲೆಗಳು
ತರಗತಿ: 1 ರಿಂದ 8ನೇ ತರಗತಿವರೆಗೆ ಪ್ರವೇಶ ಲಭ್ಯವಿದೆ.
ಬೇಕಾಗುವ ದಾಖಲೆಗಳು:
- ಮಗುವಿನ ಇತ್ತೀಚಿನ 2 ಪಾಸ್‌ಪೋರ್ಟ್ ಅಳತೆಯ ಫೋಟೋಗಳು.
- ಮಗುವಿನ ಜನನ ಪ್ರಮಾಣ ಪತ್ರ (Birth Certificate).
- ಮಗು ಮತ್ತು ಪೋಷಕರ ಆಧಾರ್ ಕಾರ್ಡ್ ಪ್ರತಿ.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Caste & Income Certificate).
- ಬ್ಯಾಂಕ್ ಖಾತೆಯ ಪಾಸ್‌ಬುಕ್ ಪ್ರತಿ.
- ಪಡಿತರ ಚೀಟಿ (Ration Card) ಪ್ರತಿ.

ಸುಸಜ್ಜಿತ ಊಟದ ಕೋಣೆ 
ಆಟದ ಮೈದಾನ - ದೈಹಿಕ ಶಿಕ್ಷಣ 
ಕ್ಷೀರ ಭಾಗ್ಯ
📞 ನಮ್ಮನ್ನು ಸಂಪರ್ಕಿಸಿ
ನಿಮ್ಮ ಮಗುವಿನ ಉಜ್ವಲ ಭವಿಷ್ಯಕ್ಕಾಗಿ ಇಂದೇ ಶಾಲಾ ಕಚೇರಿಗೆ ಭೇಟಿ ನೀಡಿ ಪ್ರವೇಶವನ್ನು ಖಚಿತಪಡಿಸಿಕೊಳ್ಳಿ.
📍 ವಿಳಾಸ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಲೇನಟ್ಟಿ (ತಾ: ಅಳ್ನಾವರ, ಜಿ: ಧಾರವಾಡ).
📅 ಸಮಯ: ಬೆಳಿಗ್ಗೆ 10:30 ರಿಂದ ಸಂಜೆ 5:00 ರವರೆಗೆ.
"ಸರ್ಕಾರಿ ಶಾಲೆಗೆ ಸೇರಿಸಿ - ದೇಶದ ಪ್ರಗತಿಗೆ ಕೈಜೋಡಿಸಿ"
ಗುರು ಬಳಗ
ನಮ್ಮ ಬ್ಲಾಗ್ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು!


Comments
Post a Comment