Posts

Showing posts from December, 2025

ಬಾಲ್ಯ ವಿವಾಹ ಮುಕ್ತ ಸಮಾಜ: ಸುಭದ್ರ ಭವಿಷ್ಯದ ದಿಕ್ಸೂಚಿ

Image
ದಿನಾಂಕ:  22-12-2025 | ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಶೇನಟ್ಟಿ. ​ಬಾಲ್ಯ ವಿವಾಹ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡುವ ಸಾಮಾಜಿಕ ಪಿಡುಗು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಶೇನಟ್ಟಿ ಯಲ್ಲಿ  "ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ" ವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ​ಕಾರ್ಯಕ್ರಮದ ಆರಂಭದಲ್ಲಿ, ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು "ಬಾಲ್ಯ ವಿವಾಹವನ್ನು ಬೆಂಬಲಿಸುವುದಿಲ್ಲ" ಎಂದು ಪ್ರತಿಜ್ಞೆ ಮಾಡಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸುತ್ತಿರುವುದು ​ ಜಾಗೃತಿ ಮತ್ತು ಸಂದೇಶ ​ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ ಬಿ ತಾಯಣ್ಣವರ  ಅವರು ಕಾರ್ಯಕ್ರಮ ಉದ್ಘಾಟಿಸಿ, "ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಬಾಲ್ಯ ವಿವಾಹದಿಂದ ಅವರ ಆರೋಗ್ಯ ಮತ್ತು ಭವಿಷ್ಯಕ್ಕೆ ಧಕ್ಕೆಯಾಗುತ್ತದೆ. ನಮ್ಮ ಗ್ರಾಮವನ್ನು ಬಾಲ್ಯ ವಿವಾಹ ಮುಕ್ತ ಗ್ರಾಮವನ್ನಾಗಿ ಮಾಡೋಣ"  ಬಾಲ್ಯ ವಿವಾಹ ಮುಕ್ತ ಸಮಾಜ; ಸುಭದ್ರ ಭವಿಷ್ಯದ ದಿಕ್ಸೂಚಿ ಎಂದು ಕರೆ ನೀಡಿದರು. ​ವಿದ್ಯಾರ್ಥಿಗಳು "ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ", "ಓದಲಿ ಹೆಣ್ಣು ಮಗು" ಎಂಬ ಘೋಷಣೆ ಕೂಗಿದರು. ​ ಕಾನೂನು ಅರಿವು ಮತ್ತು ಪ್ರತಿಜ್ಞೆ ​ಶಾಲೆ ಶಿಕ್ಷಕರರಾದ  ಶ್ರೀ ಶಿವಾನಂದ ಲೋಕಪ್ಪನವರ  ಅವರು ಬಾಲ್ಯ ವಿವಾಹ ನಿಷೇಧ ಕಾಯ್ದೆ-2006...